🌍ಸಾಮಾನ್ಯ ಜ್ಞಾನಸಿರಿ 🌍====================
♦️ ಈ ದಿನದ ವಿಶೇಷ ♦️
🔹28-07-2020🔹
🌺 ಇಂದು ವಿಶ್ವ ಹೆಪಟೈಟಿಸ್ ದಿನ
[World Hepatitis Day].
⑉⑉⑉⑉⑉⑉⑉⑉༄༄༄⑉⑉⑉⑉⑉⑉⑉⑉
👉 ಪ್ರತಿ ವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷ ಜಾಗೃತಿ ಮತ್ತು ಅರಿವು ಮೂಡಿಸಲು ಆಚರಿಸಲಾಗುವ ಈ ದಿನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
🌷 ಏನಿದು ಹೆಪಟೈಟಿಸ್:- ಯಕೃತ್ತಿನಲ್ಲಿ (ಲಿವರ್) ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಈ ಉರಿಯೂತ ಸತತ ಮದ್ಯಪಾನ ಸೇವನೆಯಿಂದ ಅಥವಾ ವೈರಸ್‌ಗಳಿಂದ ಹೆಪಟೈಟಿಸ್ ಅನ್ನು ಹೆಪಟೈಟಿಸ್ ಎ,ಬಿ, ಸಿ ಮತ್ತು ಡೆಲ್ಟಾ ಫ್ಯಾಕ್ಟರ್ ಎಂದು ಗುರುತಿಸಲಾಗುವ ವೈರಸ್‌ಗಳಿಂದ ಹರಡಬಹುದು.
🌷ದಿನ ಹೇಗೆ ಆರಂಭವಾಯಿತು?
2010ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಹೆಪಟೈಟಿಸ್ ದಿನ ಆಚರಣೆಯನ್ನು ಜತೆಗೆ ಜುಲೈ 28 ಹೆಪಟೈಟಿಸ್ ವೈರಸ್ ಕಂಡು ಹಿಡಿದ ಮತ್ತು ಹೆಪಟೈಟಿಸ್ ರೋಗಕ್ಕೆ ಲಸಿಕೆ ಕಂಡುಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಬರೂಚ ಸಾಮ್ಯುಯಲ್ ಬ್ಲೂಮ್‌ಬರ್ಗ್ ಅವರ ಜನ್ಮದಿನವಾಗಿದೆ. ಅವರ ಗೌರವಾರ್ಥ ಜುಲೈ 28 ಅನ್ನು ವಿಶ್ವ ಹೆಪಟೈಟಿಸ್ ದಿನವಾಗಿ ಆಚರಿಸಲಾಗುತ್ತದೆ.
🌷Theme: ಹೆಪಟೈಟಿಸ್ ಮುಕ್ತ ಭವಿಷ್ಯ
[Hepatitis Free Future].
========================

No comments:
Post a Comment