Sunday 24 March 2024

ನನ್ನ ಗರ್ವ

                             ನನ್ನ ಗರ್ವ      

                 ( ಕಾಡಿನ ರಾಜ ಯಾರು? )

             ನಾನು ಯಾರು ಎಂದುಕೊಂಡಿರಿ ನಾನೆಂದರೆ ಬರೀ ನಾನಲ್ಲ ಕಾಡಿನೊಳಗೂ ನಾಡಿನೊಳಗೂ ನನ್ನ ಘರ್ಜನೆ ಮಿತಿಮೀರುವಂತ್ತದ್ದು, ಒಮ್ಮೆ ಗರ್ಜಿಸಿದರೆ ಇಡೀ ಸುತ್ತಲಿನ ತೃಣವು ಸಹ ಸಿಗದೇ ಹಾರುವಂತಹದ್ದು . ನಾನು ಯಾರು ತಿಳಿದಿದೆಯೇ ನಾನೇ ಈ ಕಾನನದ ರಾಜ. ನಾನು ಬರುತ್ತಿದ್ದರೆ ಇಡೀ ವನಮೃಗಗಳು ಚೆಲ್ಲಾ ಪಿಲ್ಲಿಯಾಗುತ್ತದೆ. ನಾನು ನಾಡಿಗೆ ಬಂದರೆ ಆ ಜಾಗದಲ್ಲೆಲ್ಲ ವಿಸ್ಮಯವೇ ಸರಿ. ಇಡೀ ಮಾನವ ಜಗತ್ತು ಮೃಗ ರಾಶಿ ನನ್ನನ್ನು ನೋಡಿ ಬೆದರಿ ಓಡಿ ಹೋಗುತ್ತವೆ . ಕಾಡು ಅಬ್ಬಬ್ಬಾ ಎಂತ ಭಯಂಕರ ಮನೋಹರ ಕೋಟ್ಯಾಂತರ ಜೀವರಾಶಿಗಳ ತಾಣ. ಈ ಕಾಡಿನಲ್ಲಿ ನಾನೇ ರಾಜ ಮಾತ್ರಕ್ಕೆ ಬರೀ ರಾಜನಲ್ಲ ಇಡೀ ಸಾಮ್ರಾಜ್ಯವೆ ನನ್ನದು ಎನ್ನುವ ಗರ್ವ . ನಾ ನಡೆದರೆ ಸಾಕು , ನಾ ಗರ್ಜಿಸಿದರೆ ಸಾಕು ,ನಾ ಹೆಜ್ಜೆ ಇಟ್ಟರೆ ಸಾಕು ಅಲ್ಲೆಲ್ಲ ಭಯದ ವಾತಾವರಣವೇ ತುಂಬಿರುತ್ತದೆ.

  ನನಗೆ ತಿಳಿಯದ ಒಂದು ವಿಚಾರವೇನೆಂದರೆ ನನ್ನನ್ನು ಕಾಡಿನ ರಾಜ ಎಂದು ಕರೆದವರು ಯಾರು ಇನ್ನುವರೆಗೂ ನನಗೆ ತಿಳಿದು ಬಂದಿಲ್ಲ , ಇತ್ತೀಚಿಗೆ ನಾನು ಕಾಡಿನಿಂದ ನಾಡಿಗೆ ಆಹಾರ ಹುಡುಕಿ ಹೊರಟಾಗ ನನ್ನನ್ನು ನೋಡಿ ಜನ ಎಲೆಗಳು ತೂರಿ ಹೋದ ರೀತಿಯಲ್ಲಿ ಜನ ಹಾರಿ ಹೋದರು. ಯಾರೋ ಪ್ರಾಣಿ ಇಡಿಯೋರು ಅಂತೆ ಬಂದು ಸ್ವಲ್ಪ ಜನ ಧೈರ್ಯಶಾಲಿಗಳು ನನ್ನನ್ನು ಹಿಡಿದು ಮತ್ತೆ ಕಾಡಿಗೆ ಕಳುಹಿಸಲು ಮಾರ್ಪಡು ಮಾಡಿದರು. ಬೇರೆ ದಾರಿ ಇಲ್ಲದೆ ನನ್ನನ್ನು ಹಿಡಿದರು. ನನ್ನನ್ನು ಸೆರೆಮನೆಗೆ ಹಾಕಿ ಕಾಡಿಗೆ ಕರೆ ತರಬೇಕಾದರೆ ಎಲ್ಲರೂ ನನ್ನನ್ನು ಈತ ಕಾಡಿನ ರಾಜ,ಕಾಡಿನ ರಾಜ ಕಾಡಿನ ರಾಜ , ಎಂದು ಹುದ್ಗರಿಸುತ್ತಿದ್ದರು. ನನಗೆ ಆಶ್ಚರ್ಯ ವಾಯಿತು ಹಾಗಾದ್ರೆ ಕಾಡಿನ ರಾಜ ಯಾರು? ಎಂದು ಯೋಚಿಸುತ್ತಿದೆ ಆಗ ತಿಳಿಯಿತು ಅದು ನಾನೆ ಎಂದು ಏಕೆಂದರೆ ಅಲ್ಲಿ ಸಿಕ್ಕಿಹಾಕಿಕೊಂಡಿದ್ದವನು ನಾನೊಬ್ಬನೇ ಹೊರತು ಬೇರೆ ಯಾರು ಅಲ್ಲ. ಆಗ ತಿಳಿಯಿತು ನನ್ನ ಹೆಸರು ಕಾಡಿನ ರಾಜ ಇನ್ನೊಬ್ಬ ತಡವಡಿಸುತ್ತಿದ್ದ ಹೇಳುತ್ತಿದ್ದ ಈತನು ಸಿಂಹ ಎಂದು ಅಂದರೆ ಸಿಂಹ ಕಾಡಿನ ರಾಜ ಇಬ್ಬರೂ ನಾನೇನಾ, ಎಂದು ಯೋಚಿಸ ತೊಡಗಿದೆ ಆದರೆ ನಿಜವಾಗಿಯೂ ನನ್ನ ಹೆಸರು ಸಿಂಹ ಎಂದು , ಈ ಜನರು ನಮ್ಮನ್ನ ಗುರುತಿಸಲು ಇಟ್ಟಿರುವ ಹೆಸರು ಎಂದು ತಿಳಿಯಿತು. ಅದೇ ರೀತಿ ನನ್ನ ಕೇಶ ಅಲಂಕಾರ ನನ್ನ ಮೈಕಟ್ಟು, ನನ್ನ ವೇಗ, ನನ್ನ ಧೈರ್ಯ, ನನ್ನ ಸೂಕ್ಷ್ಮತೆ, ನನ್ನ ಕುಶಲತೆ ಇದನ್ನೆಲ್ಲ ಗಮನಿಸಿ ಈ ಜನರು ಅಂದರೆ ಈ ಬುದ್ಧಿವಂತ ಜನರು ನನ್ನನ್ನ ಕಾಡಿನ ರಾಜ ಎಂದು ಕರೆದರು .

      ನಾನು ಕಾಡಿನ ರಾಜ ಎಂದು ಅವರೆಲ್ಲರೂ ಹೇಳುವಾಗ ನನಗೆ ಹೆಮ್ಮೆ ಉಂಟಾಗುತ್ತಿತ್ತು ಅಬ್ಬಬ್ಬ ಎಂತಹ ಪಟ್ಟವನ್ನು ನನಗೆ ಕಟ್ಟಿದ್ದಾರೆ ಎಂದು ಹಾಗೆಯೇ ನಾನು ಸಿಂಹ ನನ್ನಲ್ಲಿ ಸೂಕ್ಷ್ಮತೆ ಇದೆ ಚಾಕಚಕ್ಯತೆ ಇದೆ ನಿಖರವಾಗಿ ಗುರಿಯನ್ನು ತಲುಪುವ, ಗುರಿಯನ್ನು ಹಿಡಿಯುವ, ಪ್ರಾಣಿಯನ್ನು ತಿನ್ನುವ ಕೌಶಲ್ಯನಾಗಿದ್ದೇನೆ . ಹಾಗಾಗಿ ನನ್ನನ್ನ ಇವರೆಲ್ಲ ಕಾಡಿನ ರಾಜ ಎಂದು ಹೇಳಿರಬಹುದು. ಬೇರೆ ಪ್ರಾಣಿಗಳನ್ನ ಅಂದರೆ ಹುಲಿಯಾಗಿರಬಹುದು ಚಿರತೆ ಆಗಿರಬಹುದು ಇನ್ನಿತರ ಮಾಂಸಾಹಾರಿ ಪ್ರಾಣಿಗಳನ್ನ ಗಮನಿಸಿದ್ದೀರಾ ಆ ಎಲ್ಲಾ ಪ್ರಾಣಿಗಳಿಗೂ ಒಂದು ರೀತಿಯಾದಂತಹ ಭಯ ಇರುತ್ತದೆ. ಆದರೆ ನನ್ನಲ್ಲಿ ಆ ಭಯ ನನ್ನ ಹತ್ರವು ಸಹ ಸುಳಿಯದಿಲ್ಲ, ಏಕೆಂದರೆ ನನ್ನಲ್ಲಿ ಅಗಾಧವಾದ ಶಕ್ತಿ ಜೊತೆಗೆ ಧೈರ್ಯ ತುಂಬಿದೆ ಇದರಿಂದಲೇ ನಾನು ನನಗಿಂತ ಎತ್ತರವಾದ ದೈತ್ಯವಾದ ಶಕ್ತಿಶಾಲಿಯಾಗಿರುವ ಪ್ರಾಣಿಗಳ ಜೊತೆ ಕಾದಾಟ ಕಿಳಿಯುತ್ತೇನೆ ಕಾದಾಟದಲ್ಲಿ ಇಳಿದು ಅದನ್ನು ಕ್ಷಣಮಾತ್ರದಲ್ಲಿ ಕೊಂದು ರಕ್ತದೊಕೊಳಿ ಮಾಡಿ ಆಹಾರವನ್ನು ಸೇವಿಸುತ್ತೇನೆ ಇದು ನನ್ನ ಶಕ್ತಿ.

      ನನ್ನ ಶಕ್ತಿ, ನನ್ನ ಸೌಂದರ್ಯ, ನನ್ನ ಚಾಣಾಕ್ಷತನ ನನ್ನ ಬುದ್ಧಿವಂತಿಕೆ ಇದನ್ನೆಲ್ಲ ಮೆಚ್ಚಿದ ಅನೇಕ ಕವಿ, ಕವಿಯತ್ರಿಯರು ನನ್ನ ಬಗ್ಗೆ ವರ್ಣನೆಯ ಮಹಾಪೂರವನ್ನೇ ಹರಿಸಿದ್ದಾರೆ. ನನ್ನನ್ನು ಹೊಗಳಿರುವ ರೀತಿಗೆ ನಾನು ಮಾರು ಹೋಗಿದ್ದೇನೆ. ಅದರಲ್ಲೂ ಅನೇಕ ಬುದ್ಧಿವಂತ ಜೀವಿಗಳು ಅಂದರೆ ವಿಜ್ಞಾನಿಗಳು ನನ್ನ ಬಗ್ಗೆ ಅಧ್ಯಯನ ಮಾಡಿರೋದು ಉಂಟು ಅದರ ಪ್ರತಿಫಲವಾಗಿಯೇ ಇಂದು ನಾನು ಕಾಡಿನ ರಾಜನಾಗಿದ್ದೇನೆ ಕಾಡಿನ ರಾಜನೆಂದರೆ ಸುಮ್ಮನೆ ಹೇಳಬಹುದೇ ಅದಕ್ಕೆ ಪುರಾವೇ ಬೆಕಲ್ಲವೇ.

      ಇದೆಲ್ಲ ಸರಿ ನಾನು ಕಾಡಿನ ರಾಜನೇ ಆದರೆ ನಿಜವಾಗಿಯೂ ನೀವು ಅಂದುಕೊಳ್ಳುವಷ್ಟು ಸುಲಭದ ರಾಜನಲ್ಲ ನಾನು ನಿಮಗೆ ತಿಳಿದಿರುವಂತೆ ಆಕ್ರಮಣಕಾರಿಯು ಪರಕ್ರಮಿಯು ಶೌರ್ಯವಂತನು ಹೌದು ಹಾಗೆಯೇ ಕೆಲವೊಮ್ಮೆ ಶಕ್ತಿ ಹೀನಾನಾನು ಹೌದು . ನಾ ಕಾಡಿನ ರಾಜ ಎಂದರೆ ನನ್ನ ಸ್ನೇಹಿತ ಸ್ನೇಹಿತೆಯರು ಸಹ ಕಾಡಿನ ರಾಜರೇ . ಆದರೆ ಪರಿಸ್ಥಿತಿಗೆ ಅನುಗುಣವಾಗಿ ಸೋತು ಸುಣ್ಣವಾಗಿ ಸತ್ತಿರುವುದು ಉಂಟು. ಒಮ್ಮೊಮ್ಮೆ ದೈತ್ಯಪ್ರಾಣಿಯಿಂದ ನೋವನ್ನುಂಟು ಆಗಿರುವ ಸಂಗತಿ ಕಾಣ ಸಿಗುತ್ತದೆ . 

       ಈಗೊಮ್ಮೆ ಮುಗಿಲಿಗೆ ಕತ್ತನ್ನು ಹಾಕಿ ಆಹಾರ ತಿನ್ನುವ, ದೊಡ್ಡ ಕತ್ತುಳ್ಳ, ಕಲ್ಲಿನ ಬಂಡೆಯಂತೆ ನಿಲ್ಲುವ ಜಿರಾಫೆ . ಇದನ್ನು ಕಂಡ ನನ್ನ ಸ್ನೇಹಿತನು ಚಾಣಾಕ್ಷಣತನದಿಂದ ಹೋಗಿ ಜಿರಾಫೆಯನ್ನು ತಿಂದೆ ಬಿಡೋಣ ಎಂದು ನಿರ್ಧರಿಸಿ ಅದನ್ನ ದೂರದಿಂದಲೇ ಗ್ರಹಿಸಿ ಹೊಂಚು ಹಾಕಿ ಹೆಗರಿದನು ಅಯ್ಯಯ್ಯೋ! ಯಾಕೆ ಹೇಳುತ್ತೀರಾ ಜಿರಾಫೆಯೊ ತನ್ನ ಹಿಂಬದಿಯ ಕಾಲಿನಿಂದ ಒಂದು ಲೊತ್ತ ಕೊಟ್ಟಿತ್ತು ನೋಡಿ, ಅಬ್ಬಬ್ಬಾ ಎಂತಹ ನೋವೆಂದರೆ ಜೀವನಪೂರ್ತಿ ನೆನಪಿಸಿಕೊಳ್ಳುವಂತಹ ಏಟನ್ನು ಜಿರಾಫೆ ನೀಡಿತು. ಇದರಿಂದ ಹೊಡೆಸಿಕೊಂಡನೆಂಬ ಕೋಪಕ್ಕೋ ಅದನ್ನು ಕೊಲ್ಲಬೇಕು ಎಂಬ ಹಠಕ್ಕೂ ನನ್ನ ಸ್ನೇಹಿತ ಮತ್ತೊಮ್ಮೆ ಪ್ರಯತ್ನಪಟ್ಟಿತು . ಹೀಗ ಆಕ್ರಮಣಕ್ಕೆ ಮೀತಿಯೇ ಇಲ್ಲವೆಂಬಂತೆ ಹೋರಾಟ ನಡೆಸಿತು ಮತ್ತದೇ ಹೊಡೆತ ಹೊಡೆದ ಏಟಿಗೆ ಬಾಯಲ್ಲಿರುವ ಹಲ್ಲುಗಳೆಲ್ಲ ಪುಡಿಪುಡಿಯಾಗಿ ನೆಲಕ್ಕೆ ಉರುಳಿತು ಮತ್ತೆ ಹೇಳಲು ಸ್ವಲ್ಪ ಸಮಯ ತೆಗೆದುಕೊಂಡಿತು ಅಯ್ಯೋ ಸಹವಾಸವೇ ಬೇಡ ಎಂದು ನಿಧಾನವಾಗಿ ಕಣ್ಣು ಬಿಟ್ಟು ಯಾರು ಇಲ್ಲ ಎಂದು ಹೇಳಿ ಯಾರು ನೋಡಲಿಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋದನು. ಆದರೆ ಅದನ್ನು ನಾನು ಕಣ್ಣಾರೆ ಕಂಡೆ ಹೇಳುವುದಕ್ಕೆ ಸಾಧ್ಯವಿಲ್ಲ ಏಕೆಂದರೆ ನಾನು ಕಾಡಿನ ರಾಜನೇ ಅವನು ಸಹ ಕಾಡಿನ ರಾಜವೇ ಅಲ್ಲವೇ ಈಗ ಹೇಳಿ ಯಾರು ಕಾಡಿನ ರಾಜ.

      ನನ್ನ ಸ್ನೇಹಿತರೆಲ್ಲ ಹೀಗೆ ಆಹಾರ ಹುಡುಕುತ್ತಾ ಅಲೆದಾಡುತ್ತಾ ಕಾಡಿನ ಮಧ್ಯದಲ್ಲಿಜುಳು ಜುಳು ಅರಿಯುವ ನದಿಯ ಸಮೀಪದಲ್ಲಿ ಕಾಡೆಮ್ಮೆಗಳು ನೀರನ್ನು ಕುಡಿಯುತ್ತಿವೆ. ಇದನ್ನು ಕಂಡ ನನ್ನ ಸ್ನೇಹಿತೆಯರ ಗುಂಪು ಆ ಕಾಡೆಮ್ಮೆಗಳನ್ನು ತಿನ್ನಲು ಮುಂದಾಯಿತು. ನಿಧಾನಗತಿಯಿಂದ ಕಾಡೆಮ್ಮೆಗಳನ್ನು ಹಿಡಿಯಲು ಹೊಂಚಾಕುತ್ತಿದಗುತ್ತಿದ್ದು .ಎಲ್ಲರೂ ಒಂದೊಂದು ಕಡೆಯಿಂದ ಆ ಕಾಡೆಮ್ಮೆ ಹಿಂಡನ್ನ ಅಟ್ಯಾಕ್ ಮಾಡಿದವು. ದಾಳಿ ಇಟ್ಟೊಡನೆ ಎಲ್ಲಾ ಕಾಡೆಮ್ಮೆಗಳು ಅತ್ತಿತ್ತಾ ಚದುರಿ ಹೋದವು ಕೊನೆಗೆ ಒಂದು ಕಾಡೆಮ್ಮೆ ಅವರಿಗೆ ಸಿಕ್ಕ ಹಾಕಿಕೊಂಡಿತು. ಆ ಸ್ನೇಹಿತೆಯರಲ್ಲಿ ಒಬ್ಬಳು ಕಾಡೆಮ್ಮೆಯ ಕತ್ತನ್ನ ಏಸುಕಿ ಹಿಡಿದಿಟ್ಟುಕೊಂಡಳು. ಇನ್ನೊಬ್ಬಳು ಹಿಂಬದಿಯಲ್ಲಿ ಹಿಡಿಯಲು ಪ್ರಯತ್ನಿಸುತ್ತಿದ್ದಳು . ಇನ್ನೊಂದು ಹೊಟ್ಟೆಯ ಬದಿಯಲ್ಲಿ ಹಿಡಿಯಲು ಹೋದಾಗ ಆ ಕಾಡೆಮ್ಮೆಯ ಕೊಂಬು ಅದರ ಹಿಂಬದಿಯ ಕಾಲಿಗೆ ಸಿಕ್ಕಿಕೊಂಡಿತು. ಎಂಥ ಯಾತನೆ ,ಅಂದರೆ ಆ ಕಾಡೆಮ್ಮೆ ಆ ಸಿಂಹಿಣಿಯನ್ನು ಎತ್ತಿ ಎತ್ತಿ ಮೇಲೆ ಕೆಳಗೆ ಕುಲುಕುತ್ತಿತ್ತು. ಎಲ್ಲಿ ಆ ಕಾಲಿನ ಚರ್ಮ ಕಿತ್ತು ಬರುತ್ತದೆಯೋ ಎಂಬ ಹಿಂಸೆ ಆಗುತ್ತಿತ್ತು ಅದಕ್ಕೆ , ಅದು ಹೇಗೋ? ಆ ಕಾಡೆಮ್ಮೆಯ ರಭಸಕ್ಕೆ ಆ ಕೊಂಬು ಕಾಲಿನ ಚರ್ಮದಿಂದ ಹೊರಬಂದಿತು ...ಜೀವ ಉಳಿಯಿತು ಎಂದು ಅಲ್ಲಿಂದ ತಪ್ಪಿಸಿಕೊಂಡು ಬಂದಿತು. ಅದರ ಮೈ ಅದರ ಮೈಯಿಂದ ರಕ್ತದ ಚಿಲುಮೆ ಜಿನುಗುತ್ತಾ ಅರಿಯುತ್ತಿತ್ತು ಅದರ ಚರ್ಮವು ಹೊರಗೆ ಕಾಣುತ್ತಿತ್ತು ಮಾಂಸ ಖಂಡಗಳು ಎಲ್ಲರಿಗೂ ತೋರ್ಪಡಿಸುವಂತೆ ತೋರುತ್ತಿತ್ತು. ಆ ಸಿಂಹಿಣಿ ನೋವಿನಿಂದ ಉದ್ಘಿರಿಸುತ್ತಾ ,ಘರ್ಜಿಸುತ್ತಾ, ನಿಧಾನವಾಗಿ ಹೆಜ್ಜೆ ಹಾಕುತ್ತಾ ಮುಂದೆ ನಡೆಯುತ್ತಿದ್ದರೆ ಎಂತಹ ದುರ್ಗತಿ ಅಲ್ಲವೇ ಇದೇನಾ ಕಾಡಿನ ರಾಣಿ .

       ನನ್ನೊಬ್ಬ ಸಂಬಂಧಿಕರು ಎಂದರೆ ಹಿರೀಕನೇ ಇರಬಹುದು ಕೃಶವಾದ ದೇಹ, ಕುಳಿ ಬಿದ್ದ ಕಣ್ಣು, ಕಾಡು ಹೋಗೆನ್ನುತ್ತಿದೆ ಮಸಣ ಬಾ ಎನ್ನುತ್ತಿದೆ ಆಗಿದ್ದರು ಇದರ ಪರಿಸ್ಥಿತಿ ಹುಲ್ಲು ತಿನ್ನೋಕಾಗುತ್ತದೆಯೇ ಹೇಗಾದರೂ ಸರಿ ಚಿಕ್ಕ ಚಿಕ್ಕ ಪ್ರಾಣಿಗಳನ್ನಾದರೂ ಕೊಂದು ತಿಂದು ಬದುಕಬೇಕೆಂಬ ಆಸೆ . ಆ ವಯೋವೃದ್ಧ ವಾದ ಸಿಂಹದ ಜೀವನದ ಅಂತ್ಯದ ಆದಿ ಇರಬಹುದು . ಹೈನಾ ( ಕತ್ತೆ ಕಿರುಬ)ಗಳು ಸಿಂಹವನ್ನು ಮುತ್ತುಕೊಂಡಿತು. ನೋಡು ನೋಡುತ್ತಿದ್ದ ಹಾಗೆಯೇ ಆ ವಯಸ್ಸಾದ ಸಿಂಹವನ್ನು ಈ ಹೈನಾಗಳು ಹಿಡಿದು ಹಿಂಸಿಸುತ್ತಾ ತಿನ್ನಲು ಮುಂದಾಗಿದ್ದವು. ಸಿಂಹವು ಎಷ್ಟೇ ಪ್ರಯತ್ನ ಪಟ್ಟರು ಆದರಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗದೆ ಇರುವ ರೀತಿಯಲ್ಲಿ ವ್ಯಥೆ ಪಡುತ್ತಿದ್ದವು. ಕಾಡಿನ ರಾಜನಾದರೂ ಕೊನೆಗೊಂದು ದಿನ ಬೇರೆಯವರಿಗೆ ಆಹಾರವಾಗಬೇಕಾಗಿತಲ್ಲವೇ ಎನ್ನುವ ನಿರಾಸೆಯ ಪಥದಲ್ಲಿಯೇ ಪ್ರಾಣವನ್ನ ಕಳೆದುಕೊಂಡಿತ್ತು ಅಂದು. ಈಗ ಹೇಳಿ ನಿಜವಾಗಿಯೂ ಕಾಡಿನ ರಾಜ ಯಾರು.

        ಕೆಲವೊಬ್ಬರು ಕಾಡಿಗೆ ಆಗಾಗ ಬಂದು ನಮ್ಮನ್ನೆಲ್ಲ ಎದುರಿಸುವುದಕ್ಕೆ ತುಪಾಕಿಗಳನ್ನ ಹಿಡಿದು ಸಿಡಿಸುತ್ತಿದ್ದರು. ಕೆಲವೊಬ್ಬರು ಅವರ ಗುಂಡಿಗೆ ಬಲಿಯಾಗುತ್ತಿದ್ದೆವು. ಆ ಗುಂಡಿನ ಒಡೆತಕ್ಕೆ ನಮ್ಮ ಚರ್ಮಗಳೆಲ್ಲ ಕಿತ್ತು ಹೊರ ಬರುತ್ತಿದ್ದವು.ನಮ್ಮನ್ನೆಲ್ಲ ಸಾಯಿಸಿ ನಮ್ಮ ಮಾಂಸ ಮತ್ತು ನಮ್ಮ ಚರ್ಮಗಳನ್ನ ಅನೇಕ ಕೆಲಸಗಳಿಗೆ ಬಳಸುತ್ತಿದ್ದರು ಎಂದು ಕೇಳಲ್ಪಟ್ಟಿದ್ದೇನೆ. ಆಗ ಒಂದು ರೀತಿಯ ಸಮಸ್ಯೆ ಎಂದರೆ ಈಗ ಇನ್ನೊಂದು ರೀತಿಯಾದ ಸಮಸ್ಯೆ , ಕಾಡಿನಲ್ಲೇ ಕೆಲವು ಮನೆಗಳನ್ನು ಕಟ್ಟಿಕೊಂಡು ಫೈಯರ್ ಕ್ಯಾಂಪಿಂಗು, ಮೋಜು ಮಸ್ತಿ ಎಂದು ಆಟವಾಡುತ್ತಾ ನಮ್ಮ ಪ್ರದೇಶಗಳಿಗೆ ಲಗ್ಗೆ ಇಡುತ್ತಿದ್ದಾರೆ . ಕಾಡನ್ನ ಸಂಪೂರ್ಣವಾಗಿ ಅವರ ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಏನು ಸರ್ಕಾರವಂತೆ ಅನೇಕ ರೀತಿಯ ಕಾನೂನು ಕಾಯ್ದೆಗಳನ್ನ ಮಾಡಿದೆಯಂತೆ ಆದರೆ ಅದು ಎಷ್ಟರಮಟ್ಟಿಗೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದೇನೆ ತಿಳಿದಿಲ್ಲ ಆದರೆ ನಮ್ಮ ಜೀವನಗಳಂತೂ ನಿಜವಾಗಿಯೂ ತೃಣಕ್ಕೆ ಸಮಾನವಾದಂತಾಗಿದೆ ಈಗ ಹೇಳಿ ನಿಜವಾಗಿಯೂ ಕಾಡಿನ ರಾಜ ನಾನಾ ಇಲ್ಲ ಯಾರು?