Sunday 27 March 2022

ಎಸ್.ಎಸ್.ಎಲ್.ಸಿ. ಪರೀಕ್ಷೆ ಬಗ್ಗೆ ಆತಂಕ ಭಯ ಬೇಡ

 ಎಸ್.ಎಸ್.ಎಲ್.ಸಿ. ಪರೀಕ್ಷೆ ಬಗ್ಗೆ ಆತಂಕ ಭಯ ಬೇಡ !


                                                                       ಎಲ್ಲಾ ವಿಷಯಗಳಿಗೆ ಆದ್ಯತೆಯ ಮೇರೆಗೆ ವೇಳಾಪಟ್ಟಿ ನಿಗದಿಪಡಿಸಿಕೊಂಡು ಅಭ್ಯಾಸ ಮಾಡುವುದು

* ವಿಷಯವಾರು ಪಾಠಗಳು, ಅಧ್ಯಾಯಗಳನ್ನು ಆಧರಿಸಿ ಮುಖ್ಯ ಅಂಶಗಳು, ಸೂತ್ರಗಳು, ಪ್ರಮೇಯಗಳು, ರಾಸಾಯನಿಕ ಸಮೀಕರಣಗಳು, ಕಂಠಪಾಠದ ಪದ್ಯಗಳು, ವ್ಯಾಕರಣಾಂಶಗಳು, ದಿನಾಂಕ ಮತ್ತು ಐತಿಹಾಸಿಕ ಘಟನೆಗಳು, ನಕಾಶೆ ಮತ್ತು ಚಿತ್ರಗಳು ಇತ್ಯಾದಿ ಅಂಶಗಳನ್ನೊಳಗೊಂಡ ಸಣ್ಣ ಕೈಪಿಡಿಯನ್ನು ರಚಿಸಿಕೊಳ್ಳುವುದು.

* ಅಧ್ಯಯನಕ್ಕೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡುವುದು.

* ಓದುವಾಗ ಏಕಾಗ್ರತೆ ಅಭ್ಯಾಸ ಅಗತ್ಯ. ಓದಿದ್ದನ್ನು ಬರೆಯುವುದು ಹಾಗೂ ಮನನ ಮಾಡಿಕೊಳ್ಳುವುದು ಅತ್ಯಾವಶ್ಯಕ.

* ಬಾಯಿಪಾಠ ಬೇಡ. ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಅಭ್ಯಾಸದಲ್ಲಿ ತೊಡಗುವುದು.

* ಓದಿನ ಮಧ್ಯದಲ್ಲಿ ಸಣ್ಣ ವಿರಾಮವಿರಲಿ, ಓದುವ ವಿಷಯಗಳನ್ನು ಬದಲಾಯಿಸಿ. ನಿರಂತರವಾಗಿ ಒಂದೇ ವಿಷಯವನ್ನು ಓದದಿರುವುದು ಒಳ್ಳೆಯದು.

* ನೆನಪಿನ ಶಕ್ತಿ ವೃದ್ಧಿಸಿಕೊಳ್ಳಲು ಯಾವುದೇ ರೀತಿಯ ಔಷಧಿಗಳ ಮೊರೆ ಹೋಗಬೇಡಿ. ನೀರನ್ನು ಸೇವಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ.

* ಹಿತವಾದ ಮಿತವಾದ ಪೌಷ್ಠಿಕಾಂಶವುಳ್ಳ ಆಹಾರವನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು.

* ಪೂರ್ತಿ ನಿದ್ದೆಗೆಡಬಾರದು ದಿನಕ್ಕೆ ಕನಿಷ್ಠ 6 ಗಂಟೆಗಳ ಕಾಲವಾದರೂ ನಿದ್ದೆ ಮಾಡಬೇಕು.

* ಪಠ್ಯಪುಸ್ತಕಗಳನ್ನೇ ಅಭ್ಯಾಸ ಮಾಡುವುದು. ಕಾಳಸಂತೆಯಲ್ಲಿ ದೊರೆಯುವ ಪ್ರಶ್ನೆ ಪತ್ರಿಕೆಗಳು, ಗೈಡ್ಗಳಿಗೆ ಮಾರು ಹೋಗಬೇಡಿ ಮತ್ತು ಸಮಯ ವ್ಯರ್ಥ ಮಾಡಬೇಡಿ

ಭೂತವಲ್ಲ ! ಪರೀಕ್ಷೆಯ ಬಗ್ಗೆ ಆತಂಕ, ಭಯ ಬೇಡ.ಆತ್ಮವಿಶ್ವಾಸ ರೂಢಿಸಿಕೊಳ್ಳಿ, ತಾಳ್ಮೆ ಇರಲಿ, ಅವಸರ ಬೇಡ,ಅನಾವಶ್ಯಕ, ಕೀಳರಿಮೆ ಬೇಡ, ಬೇರೆಯವರೊಂದಿಗೆ ಹೋಲಿಸಿಳ್ಳಬೇಡಿ. ನಿಮ್ಮಲ್ಲಿರುವ ಸಾಮಥ್ರ್ಯವನ್ನು ಸದ್ಬಳಕೆ ಪ್ರಶ್ನೆಪತ್ರಿಕೆ ಬಯಲಾಗುವ ಬಗ್ಗೆ ಸುಳ್ಳು ವದಂತಿಗಳಿಗೆ. ನಕಲಿ ಪ್ರಶ್ನೆಪತ್ರಿಕೆಗಳ ಜಾಲಕ್ಕೆ ಬೀಳಬೇಡಿ.

*ಅಂಕೆಗಳೇ ಮಾನದಂಡವಲ್ಲ. ನಿಮ್ಮ ಸಾಮಥ್ರ್ಯದ ಬಗ್ಗೆ ನಿಮಗೆ ನಂಬಿಕೆ ಇರಲಿ.

ಪರಿಕ್ಷಾ ಸಮಯದಲ್ಲಿ ಗಮನಿಸಬೇಕಾದ ಅಂಶಗಳು

ನಿಮ್ಮ ಪ್ರವೇಶಪತ್ರವನ್ನು ಪೂರ್ಣವಾಗಿ ಓದಿ ಅದರಲ್ಲಿ ರುವ ಅಂಶಗಳನ್ನು ಪರಿಶೀಲಿಸಿಕೊಂಡು ತಪ್ಪು ಇದ್ದಲ್ಲಿ ಮುಖ್ಯಶಿಕ್ಷಕರ ಗಮನಕ್ಕೆ ತರುವುದು.

ಪ್ರವೇಶಪತ್ರದ ಹಿಂಬದಿಯಲ್ಲಿ ನೀಡಿರುವ ಸೂಚನೆಗಳನ್ನು ತಪ್ಪದೇ ಪಾಲಿಸಿ.

ಪರೀಕ್ಷೆಗೆ ಅಗತ್ಯವಿರುವ ಪ್ರವೇಶಪತ್ರ, ಪೆನ್ನು, ಪೆನ್ಸಿಲ್, ಸ್ಕೇಲ್,ಬ್ಬರ್, ಜ್ಯಾಮಿಟ್ರಿ ಬಾಕ್ಸ್ ಹೊರತುಪಡಿಸಿ ಬೇರೆ ನಿಷೇದಿತ ವಸ್ತುಗಳನ್ನು ಪರೀಕ್ಷಾ ಕೊಠಡಿಗೆ ಕೊಂಡೊಯ್ಯಬಾರದು.

* ವಿದ್ಯಾರ್ಥಿಗಳೇ ನಿಮ್ಮ ನೋಂದಣಿ ಸಂಖ್ಯೆ ಸರಿಯಾಗಿ ನೋಡಿಕೊಂಡು ಅದೇ ಸ್ಥಾನದಲ್ಲಿ ಕುಳಿತು ನಿಮ್ಮ ನೋಂದಣಿ ಸಂಖ್ಯೆಯನ್ನು ಬರೆಯಿರಿ.

* ಪ್ರಶ್ನೆಪತ್ರಿಕೆಯಲ್ಲಿರುವ ಸೂಚನೆಗಳನ್ನು ಓದಿಕೊಂಡು ನಿಖರವಾದ ಉತ್ತರವನ್ನು ಬರೆಯಿರಿ. ಸ್ಪಷ್ಟವಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ವ್ಯಾಕರಣ ದೋಷವಿಲ್ಲದೆ ನಿಮ್ಮಬರವಣಿಗೆ ಅಂದವಾಗಿ ಇರಲಿ.

* ಪರೀಕ್ಷಾ ಕೊಠಡಿಯಲ್ಲಿ ಶಿಸ್ತನ್ನು ಪಾಲಿಸಿ. ಪರೀಕ್ಷಾ ಸಮಯವನ್ನುಪೂರ್ಣವಾಗಿ ಬಳಸಿಕೊಳ್ಳಿ. ಕೊನೆಗೆ ಬರೆದ ಉತ್ತರಗಳನ್ನು ಮತ್ತೊಮ್ಮೆ ಪರಿಶೀಲಿಸು ಒಳ್ಳೆಯದು.

* ನೆನಪಿನ ಶಕ್ತಿ ವೃದ್ಧಿಸಿಕೊಳ್ಳಲು ಯಾವುದೇ ರೀತಿಯ ಔಷಧಿಗಳ ಮೊರೆ ಹೋಗಬೇಡಿ. 

* ಪ್ರತಿ ಪ್ರಶ್ನೆಗೆ ಉತ್ತರಿಸುವಾಗ ಸಮಯ ಹಂಚಿಕೆ ಸೂಕ್ತಗಿರಲಿ

* ಪರೀಕ್ಷೆ ಮುಗಿದ ವಿಷಯಗಳ ಬಗ್ಗೆ ಚರ್ಚಿಸದೆ, ಚಿಂತಿಸದೆ ಮುಂದಿನ ವಿಷಯದ ಬಗ್ಗೆ ಗಮನ ಕೊಡಿ.

* ಪರೀಕ್ಷಾ ಕೊಠಡಿಯಲ್ಲಿ ನಿಮ್ಮ ಅಕ್ಕಪಕ್ಕದ ವಿದ್ಯಾರ್ಥಿಗಳು ಉತ್ತರ ಪಡೆಯಲು ನಿಮ್ಮ ಗಮನ ಸೆಳೆದಾಗ ನೀವು ಸ್ಪಂದಿಸಬೇಡಿ.

* ಪರೀಕ್ಷಾ ಸಮಯದಲ್ಲಿ ಮಂಡಳಿಯು ಸಹಾಯವಾಣಿಯನ್ನು ವ್ಯವಸ್ಥೆ ಮಾಡುತ್ತದೆ. ಅದರ ಸದುಪಯೋಗ ಪಡೆದುಕೊಳ್ಳಿ.

ಪಾಲಕರೇ ನಿಮ್ಮ ಮಕ್ಕಳ ಮೇಲೆ ಒತ್ತಡ ಹಾಕಬೇಡಿ.

* ನಿಮ್ಮ ಮಗುವಿನ ಸಾಮಥ್ರ್ಯದ ಬಗ್ಗೆ ನಿಮಗೆ ಅರಿವಿರಲಿ.

* ಪರಿಕ್ಷಾ ಸಮಯದಲ್ಲಿ ಮಗ.ಮಗಳ ಆಹಾರ ಮತ್ತು ಆರೋಗ್ಯದ ಬಗ್ಗೆ ಗಮನವಿರಲಿ.

* ಮಕ್ಕಳಿಗೆ ಪರೀಕ್ಷೆಯ ಆತಂಕ ಅಂಟಿಸದಿರಿ. ಮಕ್ಕಳು ಅಭ್ಯಾಸ ಮಾಡುವ ಬಗ್ಗೆ ವೈಯಕ್ತಿಕ ಗಮನ ಹರಿಸಿ. ಪರೀಕ್ಷಾ ಸಮಯದಲ್ಲಿ ಮಕ್ಕಳೊಡನೆ ಹೆಚ್ಚು ಸಮಯ ಕಳೆಯಿರಿ.

* ಪೋಷಕರ ಆಸೆ ಆಕಾಂಕ್ಷೆಗಳನ್ನು ಸಾಧಿಸಲು ಮಕ್ಕಳ ಮೇಲೆ ಒತ್ತಡ ಹೇರಬೇಡಿ.

* ಪ್ರವೇಶ ಪತ್ರಗಳನ್ನು ನೀವೂ ಒಮ್ಮೆ ಪರಿಶೀಲಿಸಿಕೊಂಡು ದೃಢಪಡಿಸಿಕೊಳ್ಳಿ.\

* ಮುಗಿದ ಪರಿಕ್ಷಾ ವಿಷಯದ ಬಗ್ಗೆ ಮಕ್ಕಳಲ್ಲಿ ಪರಾಮರ್ಶೆ ಮಾಡದೇ ಮುಂದಿನ ವಿಷಯಕ್ಕೆ ಸಿದ್ಧಪಡಿಸಿಕೊಳ್ಳಲು ಪ್ರೋತ್ಸಾಹಿಸಿ.

* ಪರೀಕ್ಷೆಗೆ ಹೊರಡುವ ಮುನ್ನ ಪರೀಕ್ಷಾ ಲೇಖನ ಸಾಮಗ್ರಿ ಕೊಂಡೊಯ್ದ ಬಗ್ಗೆ ದೃಢಪಡಿಸಿಕೊಳ್ಳಿ.

* ಪರೀಕ್ಷಾ ಕೇಂದ್ರದ ಬಳಿ ಗೊಂದಲವೆಬ್ಬಿಸದಿರಿ.

* ನಕಲಿ ಪ್ರಶ್ನೆಪತ್ರಿಕೆಗಳಿಗೆ ಅವಕಾಶ ಕೊಡಬೇಡಿ.

* ಗಾಳಿ ಸುದ್ಧಿಗಳಿಗೆ ಅವಕಾಶ ಕೊಡಬೇಡಿ.

* ನೈಜ ವಿಚಾರಗಳನ್ನು ಅಧಿಕಾರಿಗಳ ಗಮನಕ್ಕೆ ಕೂಡಲೇ ತರುವುದು.

* ಪರೀಕ್ಷೆಯ ಫಲಿತಾಂಶದ ಬಗ್ಗೆ ಆತಂಕಬೇಡ.

* ಮಕ್ಕಳ ಮನಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳಿ.

* ಮಕ್ಕಳನ್ನು ಹೆದರಿಸಿ ಓದಿಸಬೇಡಿ, ಮಕ್ಕಳನ್ನು ಶಿಕ್ಷಿಸಬೇಡಿ, ಮೂದಲಿಸಬೇಡಿ, ಅವರನ್ನು ಪ್ರೀತಿಸಿ ಮತ್ತು ಪ್ರೋತ್ಸಾಹಿಸಿ.

* ಮಕ್ಕಳಿಗೆ ಓದಲು ಅನುಕೂಲವಾದ ಸೂಕ್ತ ಪರಿಸರವನ್ನು ಒದಗಿಸಿ


ALL THE BEST STUDENTS